Popular posts from this blog
ಬಿಟ್ನಿಂದ ಎಕ್ಸಾಬೈಟ್ವರೆಗೆ
ಟಿ ಜಿ ಶ್ರೀನಿಧಿ ೧೮-೧೯ನೇ ಶತಮಾನದ ಕೈಗಾರಿಕಾ ಕ್ರಾಂತಿಯ ನಂತರ ಮನುಕುಲದ ಮೇಲೆ ಅಷ್ಟೇ ದೊಡ್ಡ ಪ್ರಭಾವ ಬೀರಿರುವುದು ಮಾಹಿತಿ ಕ್ರಾಂತಿ. ಆಧುನಿಕ ಗಣಕಗಳ ಬೆಳೆವಣಿಗೆಯೊಡನೆ ಪ್ರಾರಂಭವಾದದ್ದು ಈ ಕ್ರಾಂತಿ. ಅಂತರಜಾಲದ ವಿಕಾಸ, ವಿಶ್ವವ್ಯಾಪಿ ಜಾಲದ ಹುಟ್ಟು, ಅತ್ಯಾಧುನಿಕ ಸಂವಹನ ಮಾಧ್ಯಮಗಳ ಉಗಮ ಮುಂತಾದ ಎಲ್ಲ ಹೆಜ್ಜೆಗಳೂ ನಮ್ಮ ಬದುಕನ್ನು ಅಪಾರವಾಗಿ ಬದಲಿಸಿವೆ. ವಿಶ್ವವ್ಯಾಪಿ ಜಾಲದಲ್ಲಿ, ಮೊಬೈಲ್ ಮೂಲಕ, ದೂರದರ್ಶನ-ಆಕಾಶವಾಣಿಗಳಲ್ಲಿ, ಪತ್ರಿಕೆಗಳಲ್ಲಿ - ಹೀಗೆ ಎಲ್ಲೆಲ್ಲಿ ನೋಡಿದರೂ ಮಾಹಿತಿಯ ಮಹಾಪೂರವೇ ನಮ್ಮನ್ನು ಆವರಿಸಿಕೊಂಡಿದೆ. ಮಾಹಿತಿ ಎಂದರೇನು? ವಿಶಾಲ ಅರ್ಥದಲ್ಲಿ ನೋಡಿದಾಗ ಈ ಪ್ರಪಂಚದಲ್ಲಿರುವ ಯಾವುದೇ ವಸ್ತುವಿಶೇಷದ ಬಗೆಗಿನ ವಿವರಗಳನ್ನು ಮಾಹಿತಿ ಎಂದು ಕರೆಯಬಹುದು. ಆದರೆ ಗಣಕವಿಜ್ಞಾನದ ಪ್ರಕಾರ ಯಾವುದೇ ವಸ್ತು ಅಥವಾ ವಿಷಯದ ಬಗೆಗಿನ ದತ್ತಾಂಶ(ಡೇಟಾ)ವನ್ನು ಗಣಕೀಕರಣಗೊಳಿಸಿ ಅಗತ್ಯಕ್ಕೆ ತಕ್ಕಂತೆ ಸಂಸ್ಕರಿಸಿದಾಗ ಅದು ಮಾಹಿತಿ ಎಂದು ಕರೆಸಿಕೊಳ್ಳುತ್ತದೆ. ಗಣಕದಲ್ಲಿ ರೂಪಿಸಲಾದ ಯಾವುದೇ ಕಡತ, ಇಮೇಲ್ ಸಂದೇಶ, ಅಂತರಜಾಲದ ಮೂಲಕ ಲಭ್ಯವಿರುವ ಚಿತ್ರಗಳು, ಪಠ್ಯ, ಹಾಡು - ಇವೆಲ್ಲವೂ ಮಾಹಿತಿಗೆ ಉದಾಹರಣೆಗಳು. ಎಟಿಎಂ ಕಾರ್ಡುಗಳಲ್ಲಿ, ಮೊಬೈಲಿನ ಸಿಮ್ನಲ್ಲಿ, ಗೃಹೋಪಯೋಗಿ ಉಪಕರಣಗಳಲ್ಲಿ - ಎಲ್ಲಕಡೆಯೂ ಮಾಹಿತಿ ಸಂಗ್ರಹವಾಗಿರುತ್ತದೆ. ಇವಿಷ್ಟೇ ಅಲ್ಲದೆ ಪುಸ್ತಕಗಳು, ಪತ್ರಿಕೆಗಳು, ಟೀವಿ ಕಾರ್ಯಕ್ರಮಗಳು, ಜಾಹಿರಾತುಗಳು, ದೂರವಾಣಿ ...
E, H, H+ ಇದೆಲ್ಲ ಏನು?
ಟಿ. ಜಿ. ಶ್ರೀನಿಧಿ ಮೊಬೈಲ್ ಫೋನ್ ಪರದೆಯ ಮೇಲ್ತುದಿಯಲ್ಲಿ ಹಲವು ಸಂಕೇತಗಳು ಕಾಣಸಿಗುವುದು ನಮಗೆಲ್ಲ ಗೊತ್ತು. ಈಗ ಸಮಯ ಎಷ್ಟು, ಬ್ಯಾಟರಿಯಲ್ಲಿ ಎಷ್ಟು ಶಕ್ತಿಯಿದೆ, ಮೊಬೈಲ್ ಸಿಗ್ನಲ್ ಹೇಗಿದೆ, ಬ್ಲೂಟೂತ್ ಚಾಲೂ ಆಗಿದೆಯೇ ಎನ್ನುವುದನ್ನೆಲ್ಲ ಈ ಸಂಕೇತಗಳು ನಮಗೆ ತಿಳಿಸುತ್ತವೆ. ಈ ಪೈಕಿ ಇಂಟರ್ನೆಟ್ ಸಂಪರ್ಕವನ್ನು ಸೂಚಿಸುವ ಇನ್ನೊಂದು ಸಂಕೇತವೂ ಇರುತ್ತದೆ. ವೈ-ಫೈ ಸಂಪರ್ಕ ಬಳಸುವಾಗ ಇಲ್ಲಿ ಒಂದೇ ರೀತಿಯ ಚಿಹ್ನೆ ಇದ್ದರೆ ಮೊಬೈಲ್ ಇಂಟರ್ನೆಟ್ ಬಳಸುವಾಗ ಮಾತ್ರ E, H, H+ ಮುಂತಾದ ಬೇರೆಬೇರೆ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ವಾಸ್ತವವಾಗಿ ಈ ಚಿಹ್ನೆಗಳು ನಾವು ಬಳಸುತ್ತಿರುವ ಅಂತರಜಾಲ ಸಂಪರ್ಕಕ್ಕೆ ಅನುಗುಣವಾಗಿ ಬದಲಾಗುತ್ತವೆ. ೩ಜಿ ಸಂಪರ್ಕವಿಲ್ಲದ ಕಡೆಗಳಲ್ಲಿ 'E' ಎಂಬ ಚಿಹ್ನೆ ಮೂಡುತ್ತದಲ್ಲ, ಅದು EDGE (Enhanced Data Rates for GSM Evolution) ಸಂಪರ್ಕವನ್ನು ಸೂಚಿಸುತ್ತದೆ. ಇದು ಈ ಹಿಂದೆ ಬಳಸಲಾಗುತ್ತಿದ್ದ ಜಿಪಿಆರ್ಎಸ್ (ಜನರಲ್ ಪ್ಯಾಕೆಟ್ ರೇಡಿಯೋ ಸರ್ವಿಸ್) ತಂತ್ರಜ್ಞಾನದ ಸುಧಾರಿತ ರೂಪ. ಮೂಲತಃ ೨ಜಿ ಮೊಬೈಲ್ ಜಾಲಗಳಲ್ಲಿ ದೊರಕುತ್ತಿದ್ದ ಈ ಬಗೆಯ ಸಂಪರ್ಕವನ್ನು 'G' ಚಿಹ್ನೆ ಸೂಚಿಸುತ್ತಿತ್ತು (ಎಜ್ ತಂತ್ರಜ್ಞಾನ ಬಳಸುವ ಜಾಲಗಳನ್ನು ೨.೫ಜಿ ಜಾಲಗಳೆಂದೂ ಗುರುತಿಸಲಾಗುತ್ತದೆ). ಇನ್ನು H, H+ ಮತ್ತು 3G ಎನ್ನುವ ಚಿಹ್ನೆಗಳು ೩ಜಿ ಸಂಪರ್ಕವನ್ನು ಸೂಚಿಸುತ್ತವೆ. HSPA (High Speed Packet Acces...


Shreenidhiyavarige,
ReplyDeleteHattane taragatiyavarege kannada mediumnalli oodi, electronics and communications engineeraagi nantara PSUnalli kelesa.Techinaical wordsna kanndadalli T.G.Shrinidhiyavaru yeshtu chenda baritare annodu namagallade shreesaamaanyarigoo thumbaa kushi kodo vishaya!
yella technical pusthakagalu kannadalle iddiddare... Engeeneeringu kannada madhyamadalle iddiddare...Kannadadalle yochisabahudagittu.Thumbaa saadhisabahudaagittu......
Keep it up sir,
vandanegalondige.
ನಿಧಾನವಾಗಿ ಅರ್ಥಮಾಡಿಕೊಂಡು ಬರೀತೀನಿ. ಒಂದ್ ಕಾಲ್ದಲ್ಲಿ ವಿಜ್ಞಾನದ ಬಗ್ಗೆ ತಿಂಗಳ್ ಗಟ್ಲೆ ಕಾಯ್ದ್ರು ಒಂದ್ ಲೆಖ್ನ ಸಿಗ್ತಿರ್ಲಿಲ್ಲ. ನೀವೋ ಕಂಪೂಟರ್ ಮೌಸ್ ತರ್ಹ ಕ್ಲಿಕ್ಕಿಸ್ತಾ ಹೋಗ್ತೀದೀರಾ ದಿನಾಲೂ ! ನೀಂ ಸ್ಪೀಡ್ ಗೆ ತಡ್ಕೊಳ್ಳಕ್ಕಾತ್ತಿಲ್ಲಪ್ಪ !
ReplyDeleteIts a great and praiseworthy effort..hats off to the team, which isvstriving to enrich Kannada vijnana sahitya and making commoners understand science in mother tongue... Srinivas p., Coh, UHS campus,gkvk, bengaluru.
ReplyDeleteIts a great and praiseworthy effort..hats off to the team, which isvstriving to enrich Kannada vijnana sahitya and making commoners understand science in mother tongue... Srinivas p., Coh, UHS campus,gkvk, bengaluru.
ReplyDelete