ಟಿ. ಜಿ. ಶ್ರೀನಿಧಿ ಕಳೆದ ವಾರ ಲಂಡನ್ ಒಲಿಂಪಿಕ್ಸ್ನಲ್ಲಿ ಪುರುಷರ ಸೈಕ್ಲಿಂಗ್ ಸ್ಪರ್ಧೆ ಇತ್ತಲ್ಲ, ನಗರದ ಹೊರವಲಯದಲ್ಲೂ ಸಾಗಿದ ಈ ಸೈಕಲ್ ರೇಸ್ ವೀಕ್ಷಿಸಲು ಲಕ್ಷಾಂತರ ಜನ ರಸ್ತೆಯ ಇಕ್ಕೆಲಗಳಲ್ಲೂ ನೆರೆದದ್ದು ಟೀವಿ ಪ್ರಸಾರದಲ್ಲಿ ಕಂಡುಬಂತು. ದಾರಿಯುದ್ದಕ್ಕೂ ಎಲ್ಲರೂ ಫೋಟೋ ಕ್ಲಿಕ್ಕಿಸುವವರೇ ಇದ್ದಂತಿತ್ತು. ರೇಸ್ ನೋಡಿ, ಫೋಟೋ ತೆಗೆದು ಸುಮ್ಮನಿದ್ದರೆ ಆದೀತೆ? ನಾವೆಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ, ಯಾವ ಫೋಟೋ ತೆಗೆದಿದ್ದೇವೆ, ತೆಗೆದ ಫೋಟೋ ಹೇಗಿದೆ ಎಂಬುದನ್ನೆಲ್ಲ ಅವರು ಫೇಸ್ಬುಕ್ನಲ್ಲಿ-ಟ್ವಿಟ್ಟರಿನಲ್ಲಿ ಪ್ರಕಟಿಸಲು ಪ್ರಾರಂಭಿಸಿದರು. ಮೊದಲೇ ನಗರದ ಹೊರವಲಯ, ಅಲ್ಲಿನ ನೆಟ್ವರ್ಕ್ ಹೇಗಿತ್ತೋ ಏನೋ. ಇಷ್ಟೆಲ್ಲ ಮಾಹಿತಿಯ ಪ್ರವಾಹ ಒಂದೇ ಬಾರಿಗೆ ದೂರವಾಣಿ ಜಾಲದತ್ತ ನುಗ್ಗುತ್ತಿದ್ದಂತೆ ನೆಟ್ವರ್ಕ್ ಪೂರ್ತಿ ಸುಸ್ತುಹೊಡೆದುಬಿಟ್ಟಿತಂತೆ. ಇದರ ಅನಿರೀಕ್ಷಿತ ಪರಿಣಾಮವಾದದ್ದು ಪಂದ್ಯದ ನೇರಪ್ರಸಾರದ ಮೇಲೆ. ಯಾವ ಸ್ಪರ್ಧಿಗಳು ಯಾವ ಸ್ಥಾನದಲ್ಲಿದ್ದಾರೆ ಎನ್ನುವ ಮಾಹಿತಿ ಸೈಕಲ್ಗಳಲ್ಲಿ ಅಳವಡಿಸಲಾಗಿದ್ದ ಪುಟಾಣಿ ಜಿಪಿಎಸ್ ಟ್ರಾನ್ಸ್ಮಿಟರುಗಳಿಂದ ಹೊರಟು ಮೊಬೈಲ್ ದೂರವಾಣಿ ಜಾಲದ ಮೂಲಕ ಒಲಿಂಪಿಕ್ಸ್ ಬ್ರಾಡ್ಕಾಸ್ಟಿಂಗ್ ಸರ್ವಿಸ್ಗೆ ತಲುಪಬೇಕಿತ್ತು. ಆದರೆ ಮಾಹಿತಿಯ ಈ ಸಣ್ಣ ಹರಿವು ಟ್ವಿಟ್ಟರ್-ಫೇಸ್ಬುಕ್ನತ್ತ ಹರಿಯುತ್ತಿದ್ದ ಮಹಾಪೂರದಲ್ಲಿ ಕೊಚ್ಚಿಹೋಗಿ ಟೀವಿ ಪ್ರಸಾರಕ್ಕೆ ಪಂದ್ಯದ ಅಂಕಿಅಂಶಗಳೇ ಸಿಗದ ಪರಿಸ್ಥಿತಿ ನಿರ್ಮಾಣ...
Comments
Post a Comment